.

* * TUMKUR DISTRICT POLICE BLOG * *

Friday, May 24, 2013

Crime Incidents 24-05-2013

Daily Crime Incidents as on 24-05-2013 till 1800hrs

ಮಧುಗಿರಿ ಪೊಲೀಸ್ ಠಾಣೆ ಮೊ.ಸಂ 93/2013 U/S 309 IPC

ದಿನಾಂಕ;;24-05-2013 ರಂದು ಪಿ.ಎಸ್.ಐ.ಮೇಡಂ ರವರಿಗೆ ಸುಮಾರು 11-15 ಗಂಟೆಯಲ್ಲಿ ಸಾರ್ವಜನಿಕರಿಂದ ಬಂದ ಮಾಹಿತಿ ಏನೆಂದರೆ ಒಬ್ಬ ಆಸಾಮಿಯು ಮಧುಗಿರಿ ಸಿವಿಲ್ ಬಸ್ಟಾಂಡ್ನಲ್ಲಿ ಹೊಟ್ಟೆಗೆ ಬ್ಲೇಡ್ ಹಾಕಿ ರಕ್ತಗಾಯ ಮಾಡಿಕೊಂಡು ಒದ್ದಾಡುತ್ತಿದ್ದಾರೆಂದು ತಿಳಿಸಿದ್ದರ ಮೇರೆಗೆ ಹೋಗಿ ನೋಡಲಾಗಿ ಒಬ್ಬ ವ್ಯಕ್ತಿಯು ರಕ್ತಗಾಯ ಮಾಡಿಕೊಂಡು ನರಳುತ್ತಿದ್ದು, ಆತನ ಹೆಸರು ವಿಳಾಸ ವಿಚಾರಿಸಲಾಗಿ ತಿಪ್ಪೇಸ್ವಾಮಿ ಬಿನ್ ಪುಟ್ಟಣ್ಣ,ಸುಮಾರು 28 ವರ್ಷ,ಶೆಟ್ಟಿಬಲಜಿಗರು,ಬಡಮಾರನಹಳ್ಳಿ,ಐ.ಡಿ.ಹಳ್ಳಿ ಹೋ ಮಧುಗಿರಿ ತಾ ಎಂದು ತಿಳಿಸಿದ್ದು ಈ ದಿನ ಕೋರ್ಟ್ಗೆ ತನ್ನ ಸ್ವಂತ ಕೆಲಸದ ನಿಮಿತ್ತ ಬಂದಿದ್ದು ಮಿಡಿಗೇಶಿ ಠಾಣೆಯಲ್ಲಿ ನಾನು ಈ ಹಿಂದೆ ಭಾಗ್ಯಮ್ಮ ಎಂಬುವವರ ವಿರುದ್ದ ದೂರು ನೀಡಿದ್ದು, ಆ ದೂರಿನ ಅನ್ವಯ ಕೋರ್ಟಿಗೆ ಬಂದಿದ್ದು, ಭಾಗ್ಯಮ್ಮರವರ ಅಣ್ಣ ಮತ್ತು ಇನ್ನಿಬ್ಬರು ತನಗೆ ಯಾಕೆ ಕೋರ್ಟ್ಗೆ ಬರುತ್ತೀಯಾ ಎಂದು ಗಲಾಟೆಗೆ ಬಂದಿದ್ದರಿಂದ ಮನನೊಂದು ಸಾಯುವ ಉದ್ದೇಶದಿಂದ ನನ್ನ ಬಳಿ ಇದ್ದ ಬ್ಲೇಡ್ನ್ಲಲಿ ಹೊಟ್ಟೆಗೆ ಎರಡು ಬಾರಿ ಕುಯ್ದುಕೊಂಡುರುತ್ತೇನೆ.ಎಂದು ತಿಳಿಸಿದ್ದು ,ಸದರಿಯವನು ಆತ್ಮಹತ್ಯ ಮಾಡಿಕೊಳ್ಳುವ ಉದ್ದೇಶದಿಂದ ಈ ರೀತಿ ಮಾಡಿಕೊಂಡಿದ್ದು ಈತನ ಮೇಲೆ ಪ್ರಕರಣ ದಾಖಲಿಸಿಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದರ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.


ಹುಳಿಯಾರು ಪೊಲೀಸ್ ಠಾಣಾ ಮೊ.ಸಂ. 40/2013 ಕಲಂ 279,337 ಐ.ಪಿ.ಸಿ,

ದಿನಾಂಕ: 24/05/2013 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾದಿ ಬೈರಲಿಂಗನಹಳ್ಳಿ ಗ್ರಾಮದ ಕೆ.ಉದಯಕುಮಾರ್ ಬಿನ್ ಕೃಷ್ಣಯ್ಯ ರವರು ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ: 21/05/2013 ರಂದು ಪಟ್ಟನಾಯಕನಹಳ್ಳಿ ಪೊಲೀಸ್ ಸ್ಟೇಷನ್‌ನಲ್ಲಿ ಕೆಲಸ ಮಾಡುತ್ತಿರುವ ನಮ್ಮ ಚಿಕ್ಕಪ್ಪನವರಾದ ಸಿ.ಚಂದ್ರಪ್ಪ ಇವರು ರಾತ್ರಿ ಕರ್ತವ್ಯ ಮುಗಿಸಿಕೊಂಡು, ದಿನಾಂಕ: 21/05/2013 ರಂದು ಊರಿಗೆ ಬರಲು KA05 HD-2034 ಹೀರೋ ಹೊಂಡ ದ್ವಿಚಕ್ರ ವಾಹನದಲ್ಲಿ ಬುಕ್ಕಾಪಟ್ಟಣದ ಕಡೆಯಿಂದ ರಸ್ತೆಯ ಎಡಭಾಗದಲ್ಲಿಬರುತ್ತಿರುವಾಗ, ಇವರ ವಾಹನದ ಎದುರಿಗೆ ಬೆಳ್ಳಾರ ಕಡೆಯಿಂದ ಬಂದ KA01 EF-2941 ರ ಬಜಾಜ್ ಪ್ಲಾಟೀನ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಅಜಾಗರೂಕತೆಯಿಂದ ಓಡಿಸಿ ಕೊಂಡು ಬಂದು ನನ್ನ ಚಿಕ್ಕಪ್ಪನ ಡಿಕ್ಕಿ ಹೊಡೆಸಿ ಅಪಘಾತ ಉಂಟು ಮಾಡಿದಾಗ, ರಕ್ತಗಾಯ ವಾಗಿರುತ್ತದೆ. KA01 EF-2941 ರ ವಾಹನದಲ್ಲಿ ಬರುತ್ತಿದ್ದ ಇಬ್ಬರಿಗೂ ಸಹ ಸಣ್ಣ ಪುಟ್ಟ ಪೆಟ್ಟುಗಳು ಬಿದ್ದಿರುತ್ತವೆ. ನನ್ನ ಚಿಕ್ಕಪ್ಪನವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದು ಕೊಂಡು ಹೋಗಿ ಚಿಕಿತ್ಸೆಗೆ ದಾಖಲು ಮಾಡಿ, ಚಿಕಿತ್ಸೆ ಕೊಡಿಸಿ, ಈ ದಿನ ತಡವಾಗಿ ಬಂದು ದೂರು ನೀಡಿರುತ್ತೇನೆ. ಆದ್ದರಿಂದ ತಾವು KA01 EF2941 ರ ಚಾಲಕನ ಮೇಲೆ ಕಾನೂನು ರೀತಿ ಕ್ರಮವನ್ನು ತೆಗೆದು ಕೊಳ್ಳಬೇಕೆಂದು ನೀಡಿದ ಪಿರ್ಯಾದಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಕುಣಿಗಲ್ ಪೊಲೀಸ್ ಮೊ. ನಂ: 179/2013 ಕಲಂ; 279,337 ಐ.ಪಿ.ಸಿ

ದಿನಾಂಕ;24/05/2013 ರಂದು ಮದ್ಯಾಹ್ನ 2-00 ಗಂಟೆಗೆ ಈ ಕೇಸಿನ ಪಿರ್ಯಾದಿ ತಿಪಟೂರು ತಾಲ್ಲೊಕ್, ನೊಣವಿನಕೆರೆ ಹೋಬಳಿ, ರಾಯಶೆಟ್ಟಿಹಳ್ಳಿ ಗ್ರಾಮದ ವಾಸಿಯಾದ ಕೆಂಪೇಗೌಡರವರ ಮಗನಾದ ನಂಜೇಶ್‌ಗೌಡರವರು ಠಾಣೆಗೆ ಹಾಜರಾಗಿ ನೀಡಿದ ದೂರಿನಂಶವೇನೆಂದರೆ ದಿನಾಂಕ;23/05/2013 ರಂದು ಕೆಎ-43-547 ನೇ ನಂಬರಿನ ಟಾಟಾ ಎ.ಸಿ ವಾಹನದಲ್ಲಿ ಪಿರ್ಯಾದಿ ಊರಿನಲ್ಲಿ ಎಳನೀರು ಲೋಡ್‌ ಮಾಡಿಕೊಂಡು ಬೆಂಗಳೂರಿಗೆ ಹೋಗಲು ರಾತ್ರಿ ಸುಮಾರು 12-00 ಗಂಟೆಗೆ ರಾಯಶೆಟ್ಟಿಹಳ್ಳಿಯನ್ನು ಬಿಟ್ಟು ವಾಹನದಲ್ಲಿ ವಾಹನದ ಮಾಲೀಕರಾದ ಶೇಷಕುಮಾರ್‌ರವರನ್ನು ಕೂರಿಸಿಕೊಂಡು ತುರುವೇಕೆರೆ ಯಿಂದ ಯಡೆಯೂರಿಗೆ ಬಂದು ಎನ್‌ ಹೆ ಚ್ -75 ರಸ್ತೆಯಲ್ಲಿ ವಾಹನವನ್ನು ಪಿರ್ಯಾದಿಯು ಚಾಲನೆ ಮಾಡಿಕೊಂಡು ಬೆಂಗಳೂರಿಗೆ ಹೋಗಲು ಕುಣಿಗಲ್ ತಾಲ್ಲೊಕ್,ನ ಹೇರೂರು ಗ್ರಾಮದ ಬಳಿ ಬೈಪಾಸ್ ರಸ್ತೆಯ ಎಡಭಾಗದಲ್ಲಿ ಬೆಳಗಿನ ಜಾವ 5-30 ಗಂಟೆ ಸಮಯದಲ್ಲಿ ಹೋಗುತ್ತಿರುವಾಗ ಅದೇ ಸಮಯಕ್ಕೆ ಯಡೆಯೂರು ಕಡೆಯಿಂದ ಕೆಎ-01-ಎಎ-6926 ನೇ ನಂಬರಿನ ಸುಗಮ ಬಸ್‌ ಅನ್ನು ಅದರ ಚಾಲಕನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿ ವಾಹನದ ಹಿಂಭಾಗಕ್ಕೆ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿದನು, ಪಿರ್ಯಾದಿ ಚಾಲನೆ ಮಾಡುತ್ತಿದ್ದ ವಾಹನದ ಡೋರ್‌ ಓಪನ್‌ ಆಗಿ ಪಿರ್ಯಾದಿ ಪಕ್ಕದಲ್ಲಿ ಕುಳಿತಿದ್ದ ವಾಹನದ ಮಾಲೀಕರಾದ ಶೇಷಕುಮಾರ್‌ರವರು ಡೋರಿನ ಮುಖಾಂತರ ಕೆಳಗೆ ಬಿದ್ದು ಅವರಿಗೆ ಮುಖಕ್ಕೆ ಕೈಕಾಲುಗಳೀಗೆ ಇತರೆ ಕಡೆಗಳಿಗೆ ಪೆಟ್ಟು ಬಿದ್ದು ರಕ್ತಗಾಯಗಳಾದಲವು, ಪಿರ್ಯಾದಿಯ ವಾಹನವು ಜಖಂಗೊಂಡಿದ್ದು ಬಸ್‌ ಮುಂಭಾಗದ ಸಹ ಜಖಂಆಗಿರುತ್ತೆ.ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಮತ್ತು ಬಸ್‌ ಚಾಲಕನಿಗೆ ಮತ್ತು ಪಿರ್ಯಾದಿಗೆ ಯಾವುದೇ ಚಿಕಿತ್ಸೆ ಪಡೆಯುವಂತಹ ಗಾಯಗಳೇನೂ ಆಗಿರಲಿಲ್ಲ, ಗಾಯಾಳು ಶೇಷಕುಮಾರ್‌ರವರನ್ನು ಯಾವುದೋ ಒಂದು ಆಟೋದಲ್ಲಿ ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸ ಕೊಡಿಸಿ ವೈದ್ಯರು ಚಿಕಿತ್ಸೆ ನೀಡಿ ಗಾಯಾಳು ಶೇಷಕುಮಾರ್‌ರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಗೆ ಕಳುಹಿಸಿದರು, ಅಪಘಾತವುಂಟು ಮಾಡಿದ ಸದರಿ ಬಸ್ಸಿನ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕಂತಾ ದೂರು

ಹೊನ್ನವಳ್ಳಿ ಪೊಲೀಸ್ ಠಾಣಾ ಮೊ.ನಂ-61/2013 u/s 379 IPC

ದಿ:-24/05/13ರಂದು ಬೆಳಿಗ್ಗೆ 09-30ಗಂಟೆ ಸಮಯದಲ್ಲಿ ಪಿರ್ಯಾದಿ ಶಿವನಾಯ್ಕ ಬಿನ್ ಲಚ್ಚಾನಾಯ್ಕ, 650ವರ್ಷ, ಲಂಬಾಣಿ ಜನಾಂಗ, ಕೆ.ಡಿ ಪಾಳ್ಯ, ಹೊನ್ನವಳ್ಳಿ ಹೋ, ಇವರು ಠಾಣೆಗೆ ಹಾಜರಾಗಿ ನೀಡಿದ ದೂರನ ಅಂಶವೇನೆಂದರೆ ಕೊಬ್ಬರಿದೊಡ್ಡಯ್ಯನಪಾಳ್ಯ ಗ್ರಾಮದಲ್ಲಿ ಶ್ರೀ ಮರಿಯಮ್ಮದೇವಿಯ ದೇವಸ್ಥಾನ ಇದ್ದು ಈ ದೇವಸ್ಥಾನ ಗರ್ಭಗುಡಿಯ ಮುಂಬಾಗದ ಹೊರಾಂಡದಲ್ಲಿ ಹುಂಡಿಯನ್ನು ನಿರ್ಮಿಸಿದ್ದು ಇದನ್ನು ದಿ:-22/05/13ರಂದು ರಾತ್ರಿ ಯಾರೋ ಕಳ್ಳರು ಹುಂಡಿಯನ್ನು ಮೀಟಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಹುಂಡಿಯಲ್ಲಿ ಹಣ ಎಷ್ಟಿತ್ತು ಎಂಬುದು ಪಿರ್ಯಾದಿಗೆ ತಿಳಿದಿರುವುದಿಲ್ಲ. ಈ ದೇವಸ್ಥಾನಕ್ಕೆ ಬಾಗಿಲು ಇಲ್ಲದೆ ತೆರೆದ ಬಾಗಿಲು ಆಗಿರುತ್ತೆ. ದಿ:-23/05/13ರಂದು ಮಾಮೂಲಿನಂತೆ ಅರ್ಚಕರು ಪೂಜೆ ಮಾಡಲು ಹೋದಾಗ ಹುಂಡಿಯನ್ನು ಹೊಡೆದಿರುವ ವಿಚಾರವನ್ನು ಪಿರ್ಯಾದಿಗೆ ತಿಳಿಸಿದ್ದು ಈ ದೇವಸ್ಥಾನದ ಯಜಮಾನಿಗೆ ಪಿರ್ಯಾದಿಯದ್ದೇ ಆಗಿದ್ದು ಈ ಹುಂಡಿಯಲ್ಲಿ ಹಣ ಎಷ್ಟಿತ್ತು ಎಂಬುದು ಗೊತ್ತಿಲ್ಲದೇ ಗ್ರಾಮಸ್ಥರ ಜೊತೆ ಮಾತನಾಡಿ ಈ ದಿನ ತಡವಾಗಿ ದೂರು ನೀಡಿದ್ದು ಹುಂಡಿ ಕಳ್ಳತನ ಮಾಡಿರುವ ಬಗ್ಗೆ ತನಿಖೆ ಕೈಗೊಂಡು ಕಾನೂನು ರೀತ್ಯ ಕ್ರಮವನ್ನು ಕೈಗೊಳ್ಳಲು ಪಿರ್ಯಾದಿಯು ನೀಡಿದ ದೂರಿನ ಅಂಶವಾಗಿರುತ್ತೆ.

ಹೊನ್ನವಳ್ಳಿ ಪೊಲೀಸ್ ಠಾಣಾ ಮೊ.ನಂ-62/2013 u/s 98 KP ACT

ದಿನಾಂಕ 23/05/2013 ರ ರಾತ್ರಿ ಪಿ.ಎಸ್.ಐರವರು ರಾತ್ರಿ ರೌಂಡ್ಸನಲ್ಲಿ ಇರುವಾಗ ಹೊನ್ನವಳ್ಳಿ ಠಾಣೆಯ ಸರಹದ್ದಿನ ಹುಳಿಯಾರು ತಿಪಟೂರು ರಸ್ತೆಯ ಹಾಲ್ಕುರಿಕೆ ಸಮೀಪ ಇರುವ ಶ್ರೀ ಪ್ಲೇಗಿನಮ್ಮ ದೇವಾಲಯದ ಬಳಿ ಎಸ್‌ ಹೆಚ್‌. 47 ರಸ್ತೆಯಲ್ಲಿ ರಾತ್ರಿ 3 ಗಂಟೆಗೆ ಹುಳಿಯಾರ್‌ ಕಡೆಯಿಂದ ತಿಪಟೂರು ಕಡೆಗೆ ಹೋಗಲು ಬಂದ ಲಾರಿ ನಂ ಕೆಎ-09-8447 ನೇ ಲಾರಿಯನ್ನು ತಪಾಸಣೆ ಮಾಡಿದಾಗ ಹಳೆಯ ಸಿಮೆಂಟ್‌ನ ಖಾಲಿ ಪ್ಲಾಸ್ಟಿಕ್‌ ಚೀಲಗಳ ಗಟ್ಟಗಳು ಇದ್ದು ಇದರ ಕೆಳಬಾಗದಲ್ಲಿ ಕಬ್ಬಿಣದ ಸರಳುಗಳು ಸುಮಾರು 2 ಟನ್‌ಗಳಷ್ಟಿದ್ದು ಇತರೆ ವಸ್ತುಗಳಾದ ಹಳೆಯ ಗುದ್ದಲಿಗಳು, ಪಿಕಾಶಿಗಳು, ಪ್ಲಾಸ್ಟಿಕ ಡ್ರಂ, ವಸ್ತಗಳು ಬಗ್ಗೆ ಹಾಗೂ ಚಾಲಕನ ಹೆಸರು ವಿಳಾಸವನ್ನು ವಿಚಾರಿಸಿದಾಗ ವಸ್ತುಗಳು ಬಗ್ಗೆ ದಾಖಲಾತಿಯನ್ನು ಬೆಳಿಗ್ಗೆ ಹಾಜರ್ಪಡಿಸುವುದಾಗಿ ಹೇಳಿ ತನ್ನ ಹೆಸರು ಗಂಗಾದರ ತಂದೆ ಮಗಪ್ಪ ಸುಮಾರು 36 ವರ್ಷ ಲಿಂಗಾಯ್ತರು ಲಾರಿಯ ಚಾಲಕ ಒಂದನೆ ಮುಖ್ಯ ರಸ್ತೆ 20ನೇ ಅಡ್ಡ ರಸ್ತೆ ಅರವಿಂದ ನಗರ ಮೈಸೂರು ಎಂತ ತಿಳಿಸಿದ್ದು ಲಾರಿಯನ್ನು ಠಾಣೆಯ ಮುಂಬಾಗ ತಂದು ನಿಲ್ಲಿಸಿರುತ್ತೆ.

ದಿನಾಂಕ 24/05/2013 ರಂದು ಲಾರಿಯ ಚಾಲಕನು ದಾಖಲಾತಿಗಳನ್ನು ಹಾಜರ್ಪಡಿಸದೆ ಇದ್ದುದರಿಂದ ಪಂಚರನ್ನು ಕರೆಸಿಕೊಂಡು ಪಂಚರ ಸಮಕ್ಷಮ ವಾಹನವನ್ನು ಮತ್ತು ಅದರಲ್ಲಿದ್ದ ಸುಮಾರು 2 ಟನ್‌ ಒಂದು ಲಕ್ಷ ರೂ ಮೌಲ್ಯದ ಕಬ್ಬಿಣದ ಸರಳುಗಳು ಮತ್ತು ಇತರೆ ವಸ್ತುಗಳು ಇದ್ದು ಸ್ವಾದೀನತೆಯ ಬಗ್ಗೆ ಸಮರ್ಪಕ ವಿವರಣೆಯನ್ನು ನೀಡದೆ ಇದ್ದುದರಿಂದ ಒಂದು ಲಕ್ಷ ರೂ ಮೌಲ್ಯದ ವಸ್ತುಗಳು ಹಾಗೂ ನಾಲ್ಕು ಲಕ್ಷ ಮೌಲ್ಯದ ಲಾರಿಯೊಂದಿಗೆ ಅಮಾನತ್ತು ಪಡಿಸಿಕೊಂಡು ಚಾಲಕನನ್ನು ವಶಕ್ಕೆ ತೆಗೆದುಕೊಂಡು  ಪ್ರಕರಣವನ್ನು ದಾಖಲು ಮಾಡಿರುತ್ತೆ.

ಶಿರಾ ಪೊಲೀಸ್‌ ಠಾಣಾ ಮೊ ನಂ ಮೊ ನಂ 126/13 ಕಲಂ 323,354,355,504,ರೆ/ವಿ 34 ಐ ಪಿ ಸಿ

ದಿನಾಂಕ 24/05/13 ರಂದು ಬೆಳಿಗ್ಗೆ ಸುಮರು 08:30 ಗಂಟೆ ಸಮಯದಲ್ಲಿ ಪಿರ್ಯಾದಿ ಪದ್ಮಾಕೊಂ ಮುರುಗೇಶ್, ನಾಯಕರ, ಗೌಳಿಗರ ಹಟ್ಟಿ, ಶಿರಾ ಟೌನ್ ಮತ್ತು ಆಕೆಯ ಗಂಡ ಮುರುಗೇಶ್ ರವರು ತುಮಕೂರು ಟೋಲ್ ಗೇಟ್ ನಲ್ಲಿರುವ ನಸೀಬ್ ಹೋಟೇಲ್ ಮುಂಭಾಗ ಟೀ ಕುಡಿಯುತ್ತಿರುವಾಗ ಅಲ್ಲಿಗೆ ಬಂದ ಅವರ ಬಡಾವಣೆಯೆ ರಿಹಾನ್ ಬಿನ್ ಲೇಟ್ ಮಕಾನ್ ಸೈಯದ್ ಮತ್ತು ರಪೀಕ್ ಬಿನ್ ,ಯೂಸಿಪ್ ಖಾನ್ , ದರ್ಗಾಗೇಟ್ ರವರುಗಳು ಪಿರ್ಯಾದಿ ರವರ ಮೇಲೆ ಏಕಾಏಕಿ ಗಲಾಟೆ ತಗೆದು ಬೇವರ್ಸಿ ಮುಂಡೆ, ಸೂಳೆ ಮುಂಡೆ ಆಕಡೆ ಹೋಗಿ ಟೀ ಕುಡಿಯಿರಿ ಎಂದು ಬೈಯುತ್ತಿರುವಾಗ ಮುರುಗೇಶ್ ರವರು ಏಕೇ ಬೈಯುತ್ತೀರಿ ಎಂತ ಕೇಳಿದ್ದಕ್ಕೆ ಕೈ ಮುಷ್ಠಿಯಿಂದ ಬಲಕಣ್ಣಿನ ಬಳಿ ರಪೀಕ್ ಗುದ್ದಿ, ರೆಹಾನ್ ಮುರುಗೇಶ್ ರವರನ್ನು ನೆಲಕ್ಕೆ ಕೆಡವಿಕೊಂಡು , ಕಾಲಿನಿಂದ ಒದ್ದು ಎಳೆದಾಡುತ್ತಿರವಾಗ ಬಿಡಿಕೊಸಿಳ್ಳಲು ಹೋದ ಪದ್ಮಾರವರಿಗೆ ಮುರುಗೇಶ್ ರವರನ್ನು ಎಳೆದಾಡುವಾಗ ಆತನ ಕಾಲಿನಿಂದ ಕೆಳಗೆ ಬಿದ್ದಿದ್ದ ಎಡಕಾಲಿನ ಚಪ್ಪಲಿಯನ್ನು ತೆಗೆದುಕೊಂಡು ರಪೀಕ್ ರವರು ಹೊಡೆದು , ಎಳೆದಾಡಿ ಆಕೆಯ ಜಾಕೀಟ್ ನ್ನು ಹರಿದು ಹಾಕಿ ಮತ್ತು ಕಾಲಿನಿಂದ ಹೊಟ್ಟೆಗೆ ಒದ್ದು ಜುಟ್ಟನ್ನು ಎಳೆದಾಡುತ್ತಿರುವಾಗ ಅಲ್ಲಿಗೆ ಬಂದ ಅಮೀನಾಬೀ ಅಲಿಯಾಸ್ ಗಿಡ್ಡಿ ಮತ್ತು ಮೆಹತಾಜ್ ಕೊಂ ಲೇಟ್ ದಸ್ತಗಿರ್ ರವರು ಜಗಳ ಬಿಡಿಸಿರುತ್ತಾರೆ ಆರೋಪಿತರಾದ ರಿಹಾನ್ ಮತ್ತು ರಪೀಕ್ ರವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲು ದೂರು

ಕುಣಿಗಲ್ ಪೊಲೀಸ್ ಮೊ. ನಂ: 178/2013 ಕಲಂ; 279,337 ಐ.ಪಿ.ಸಿ ರೆ/ವಿತ್ 187 ಐ.ಎಂ.ವಿ ಆಕ್ಟ್‌

ದಿನಾಂಕ;24/05/2013 ರಂದು ಮದ್ಯಾಹ್ನ 1-50 ಗಂಟೆ ಸಮಯದಲ್ಲಿ ಕುಣಿಗಲ್ ಟೌನ್, ಕುಂಬಾರಬೀದಿ, ದೊಡ್ಡಪೇಟೆಯಲ್ಲಿ ವಾಸವಾಗಿರುವ ಲೇ ಕೆ.ಎಸ್‌ ನರಸಿಂಹಮೂರ್ತಿರವರ ಮಗನಾದ 67 ವರ್ಷ ವಯಸ್ಸಿನ ಕೆ,ಎನ್‌ಸುಂದರ್‌ರಾಜ್‌ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನಂಶವೇನೆಂದರೆ ದಿನಾಂಕ;23/05/2013 ರಂದು ಮಧ್ಯಾಹ್ನ ಸುಮಾರು 12-30 ಗಂಟೆ ಸಮಯದಲ್ಲಿ ಪಿರ್ಯಾದುದಾರರು ಕುಣಿಗಲ್ ಟೌನ್‌ನ ಕಲ್ಲು ಬಿಲ್ಡಿಂಗ್‌ ನಲ್ಲಿರುವ ತನ್ನ ತಮ್ಮನ ಆರ್ಯಾಸ್‌ ರೆಡಿಮೇಟ್‌ ಬಟ್ಟೆ ಅಂಗಡಿಗೆ ಹೋಗಿ ನಂತರ ಕೆ.ಆರ್.ಎಸ್‌ ಅಗ್ರಹಾರದಲ್ಲಿರುವ ಸಹರಾ ಇಂಡಿಯಾ ಬ್ಯಾಂಕ್‌ಗೆ ಹೋಗಲು ಪಿರ್ಯಾದಿಯು ತಮ್ಮ ಬಾಬ್ತು ಕೆಎ-06-ಇಜೆ-7581 ನೇ ನಂಬರಿನ ಆಕ್ಟಿವ್‌ ಹೋಂಡಾದಲ್ಲಿ ಅಂಗಡಿಯ ಮುಂಭಾಗ ಹಾದು ಹೋಗಿರುವ ಎನ್‌.ಹೆಚ್‌.-48 ರಸ್ತೆಯ ಎಡಬದಿಯಲ್ಲಿ ಮದ್ದೂರು ರಸ್ತೆ ಕಡೆಗೆ ಹೋಗುವ ತಿರುವಿನಲ್ಲಿ ಕೆ.ಆರ್‌.ಎಸ್‌ ಅಗ್ರಹಾರದ ಕಡೆಗೆ ಹೋಗುತ್ತಿದ್ದಾಗ, ಅದೇ ಸಮಯಕ್ಕೆ ತುಮಕೂರು ರಸ್ತೆ ಕಡೆಯಿಂಧ ಬಿ.ಎಂ ರಸ್ತೆ ಮಾರ್ಗವಾಗಿ ಮದ್ದೂರು ರಸ್ತೆ ಕಡೆಗೆ ಹೋಗಲು ಬಂದ ಕೆಎ-06-ಎಬಿ-6588 ನೇ ನಂಬರಿನ ಎ.ಹೆಚ್.ಜಿ ಬಸ್ ಅನ್ನು ಅದರ ಚಾಲಕನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿ ಹೋಗುತ್ತಿದ್ದ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತವುಂಟು ಮಾಡಿದ್ದು ಈ ಅಪಘಾತದಿಂದ ಪಿರ್ಯಾದಿಯು ಕೆಳಗೆ ಬಿದ್ದು ಮಂಡಿಗೆ ತೀವ್ರ ಸ್ವರೂಪದ ಗಾಯಗಳುಂಟಾಗಿದ್ದು, ಪಿರ್ಯಾದಿಯು ದ್ವಿಚಕ್ರವಾಹನವು ಜಖಂಗೊಂಡಿದ್ದು, ಸದರಿ ಬಸ್‌ ಚಾಲಕನು ಗಾಯಾಳು ಪಿರ್ಯಾದಿಯನ್ನು ಉಪಚರಿಸದೇ ಬಸ್ಸನ್ನು ಕೃತ್ಯ ನಡೆದ ಸ್ಥಳದಿಂದ ತೆಗೆದುಕೊಂಡು ಹೋಗಿದ್ದು ನಂತರ ಪಿರ್ಯಾದಿ ತಮ್ಮ ಮಂಜುನಾಥ್‌ರವರು ಬಂದು ನನ್ನನ್ನು ಉಪಚರಿಸಿ ಯಾವುದೋ ಒಂದು ಆಟೋದಲ್ಲಿ ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದು, ನಂತರ ಬಸ್ಸಿನ ಮಾಲೀಕರನ್ನು ಭೇಟಿ ಮಾಡಲಾಗಿ ಅಪಘಾತದಲ್ಲಿ ಜಖಂ ಆಗಿರುವ ಆಕ್ಟಿವ್‌ ಹೋಂಡಾ ಬೈಕ್‌ ಅನ್ನುರಿಪೇರಿ ಮಾಡಿಸಿಕೊಡುತ್ತೇನೆಂದು ಪಿರ್ಯಾದಿಯವರಿಗೆ ಚಿಕಿತ್ಸೆ ಕೊಡಿಸುವುದಿಲ್ಲವೆಂದು ತಿಳಿಸಿರುತ್ತಾರೆ. ಆದ್ದರಿಂದ ಸದರಿ ಬಸ್‌ ಚಾಲಕ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕಂತ ನೀಡಿದ ದೂರನ್ನು ಪಡೆದು ಠಾಣಾ ಮೊ,ನಂ;178/2013, ಕಲಂ;279,337 ಐ.ಪಿ.ಸಿ ರೆ/ವಿತ್ 187 ಐ.ಎಂ.ವಿ ಆಕ್ಟ್ ರೀತ್ಯ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ,


ತಿಪಟೂರು ನಗರ ಪೊಲೀಸ್ ಠಾಣಾ ಯು.ಡಿ.ಆರ್.ನಂ- 05/2013. U/S 174 CRPC.

ದಿನಾಂಕ 24/05/2013 ರಂದು ಬೆಳಿಗ್ಗೆ 09-00 ಗಂಟೆಗೆ ಶ್ರೀಮತಿ ಸಿದ್ದಗಂಗಮ್ಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ಸುಮಾರು 21 ವರ್ಷಗಳ ಹಿಂದೆ ಶಿವರಾಜ್ ಎಂಬುವವರನ್ನು ಮದುವೆಯಾಗಿದ್ದು, ನಂತರ ಅಣ್ಣಾಪುರದಲ್ಲಿ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದು, ನಮಗೆ ಇಬ್ಬರು ಮಕ್ಕಳಿರುತ್ತಾರೆ. ಈಗ್ಗೆ 2 ವರ್ಷದಿಂದ ನನಗೂ ಮತ್ತು ನನ್ನ ಗಂಡನಿಗೂ ಸಣ್ಣಪುಟ್ಟ ವಿಚಾರಗಳಿಗೆ ಹಾಗೂ ಅತಿಯಾಗಿ ಮಧ್ಯಪಾನ ಮಾಡುತ್ತಿದ್ದು, ಇದರಿಂದ ನಾನು ಮನನೊಂದು ನನ್ನ 2 ಮಕ್ಕಳೊಂದಿಗೆ ಚೇಳೂರು ಗ್ರಾಮದಲ್ಲಿ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿರುತ್ತೇನೆ. ದಿನಾಂಕ 23/05/2013 ರಂದು ರಾತ್ರಿ 09-00 ಗಂಟೆ ಸುಮಾರಿನಲ್ಲಿ ನಮ್ಮ ಸಂಬಂದಿಕರು ಶಿವರಾಜ ಸತ್ತು ಹೋಗಿದ್ದಾನೆ ಎಂದು ವಿಚಾರ ತಿಳಿಸಿದರು. ರಾತ್ರಿ ವೇಳೆಯಾದ್ದರಿಂದ ಬಸ್ ಸೌಕರ್ಯ ಇಲ್ಲದ ಕಾರಣ ದಿನಾಂಕ 24/05/2013 ರಂದು ತಿಪಟೂರು ಸರ್ಕಾರಿ ಆಸ್ಪತ್ರೆಯ ಶವಾರಕ್ಕೆ ಬಂದು ಶವ ನೋಡಿದೆ. ನನ್ನ ಗಂಡ ಶಿವರಾಜನ ಶವವಾಗಿತ್ತು. ನಂತರ ಅಣ್ಣಾಪುರದ ಗ್ರಾಮಸ್ಥರಿಂದ ವಿಚಾರ ತಿಳಿಯಲಾಗಿ ನನ್ನ ಗಂಡ ಅತಿಯಾಗಿ ಮಧ್ಯಪಾನ ಮಾಡಿ ದಿನಾಂಕ 23/05/2013 ರ ಬೆಳಿಗ್ಗೆ 09-00 ಗಂಟೆಯಿಂದ ಸಂಜೆ 07-00 ಗಂಟೆ ಮಧ್ಯೆ ಯಾವುದೋ ಸಮಯದಲ್ಲಿ ಅತಿಯಾಗಿ ಮಧ್ಯಪಾನ ಮಾಡಿ ಕಕ್ಕಸಿಗೆ ಹೋಗಲು ಸೋಮಶೇಖರ್ ರವರ ಪಾಳು ಜಮೀನಿನಲ್ಲಿ ಕುರುಚಲು ಗಿಡದ ಮಧ್ಯೆ ಮಕಡೆಯಾಗಿ ಬಿದ್ದು ಮೃತಪಟ್ಟಿರುತ್ತಾರೆಂದು ವಿಚಾರ ತಿಳಿಯಿತು. ನನ್ನ ಗಂಡನ ಮುಖ ಮಣ್ಣಾಗಿದ್ದು ನೆಲದಲ್ಲಿ ಒದ್ದಾಡುವಾಗ ಸ್ವಲ್ಪ ಮುಖ ತರಚಿದೆ, ಬಿಸಿಲಿನ ತಾಪಕ್ಕೆ ಕೈ ಕಾಲು ಬೊಬ್ಬೆ ಬಂದಿದೆ. ನನ್ನ ಗಂಡನ ಸಾವಿನ ಬಗ್ಗೆ ಯಾರ ಮೇಲೂ ಅನುಮಾನವಿರುವುದಿಲ್ಲ. ಆದ್ದರಿಂದ ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಅಂಶ.



ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ- 109/2013. U/S 380 IPC.

ದಿನಾಂಕ 24/05/2013 ರಂದು ಬೆಳಿಗ್ಗೆ 11-30 ಗಂಟೆಗೆ ಪಿರ್ಯಾದಿ ಕು. ರೂಪ.ಎ.ಇ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ 23/05/2013 ರಂದು ರಾತ್ರಿ ಊಟ ಆ ನಂತರ ಪಶ್ಚಿಮ ಕಡೆಯ ರೂಮಿನಲ್ಲಿ ಕಿಟಕಿ ಪಕ್ಕದಲ್ಲಿ ಮಲಗಿಕೊಂಡಿದ್ದೆನು. ವಿಪರೀತ ಶಕೆ ಆದ್ದರಿಂದ ಮಧ್ಯದ ಒಂದು ಕಿಟಕಿ ಬಾಗಿಲನ್ನು ಗಾಳಿ ಸಲುವಾಗಿ ತೆರೆದು ಮಲಗಿದ್ದೆನು. ರಾತ್ರಿ ಸುಮಾರು 03-30 ಗಂಟೆಯಲ್ಲಿ ನಾನು ಮಲಗಿದ್ದ ಕಿಟಕಿ ಬಳಿ ಏನೋ ಶಬ್ದವಾಗಿ, ನಾನು ಎಚ್ಚರವಾಗಿ ಎದ್ದು ನೋಡಲಾಗಿ ಯಾರೂ ಕಾಣಲಿಲ್ಲ. ಆದರೆ ಕಿಟಕಿಗೆ ಅಳವಡಿಸಿದ್ದ ಮೆಸ್ ಹರಿದಿದ್ದು ಕಿಟಕಿಯ ಪಕ್ಕದ ಇನ್ನೊಂದು ಬಾಗಿಲು ಸಹ ತೆರದಿತ್ತು. ನನ್ನ ಕೊರಳಲ್ಲಿದ್ದ ಒಂದು ಎಳೆ ಚಿನ್ನದ ಸರ ಮತ್ತು ಅದರಲ್ಲಿದ್ದ ಡಾಲರ್ ಸಹ ಇರಲಿಲ್ಲ. ಯಾರೋ ಕಳ್ಳರು ಕಿಟಕಿ ಮುಖಾಂತರ ಕೈ ಹಾಕಿ ನನ್ನ ಕೊರಳಲ್ಲಿದ್ದ ಚೈನನ್ನು ಕಳ್ಳತನಮಾಡಿಕೊಂಡು ಹೋಗಿದ್ದು, ಕೂಡಲೇ ನಾನು ನನ್ನ ತಂದೆಯವನ್ನು ಎಚ್ಚರಿಸಿ ವಿಚಾರ ತಿಳಿಸಿ ನಂತರ ಓಣಿಯ ಜನರೆಲ್ಲಾ ಎಲ್ಲಾ ಕಡೆ ನೋಡಲಾಗಿ ಎಲ್ಲೂ ಸುಳಿವು ಸಿಗಲಿಲ್ಲ. ಕಳುವಾದ ನನ್ನ ಒಂದು ಎಳೆ ಚಿನ್ನದ ಸರ ಮತ್ತು ಡಾಲರ್ ಸೇರಿ ಸುಮಾರು 30 ಗ್ರಾಂ ಆಗಬಹುದು. ಅಂದಾಜು ಬೆಲೆ 60,000-00 ರೂ ಆಗಬಹುದು. ಈ ದಿನ ನಾನು ಕಾಲೇಜಿನ್ಲಲಿ ಪರವಾನಗಿ ಪಡೆದು ನಂತರ ಠಾಣೆಗೆ ಬಂದು ಕಳುವಾಗಿರುವ ನನ್ನ ಚಿನ್ನದ ಸರವನ್ನು ಪತ್ತೆಮಾಡಿಕೊಡಬೇಕೆಂದು ನೀಡಿದ ದೂರಿನ ಅಂಶ.


ಹುಲಿಯೂರುದುರ್ಗ ಪೊಲೀಸ್ ಠಾಣಾ ಮೊ.ನಂ 74/2013 ಕಲಂ 323,324,504,506(B) R/V 34 ಐ.ಪಿ.ಸಿ
ಈ ಕೇಸಿನ ಸಂಕ್ಷೀಪ್ತ ಸಾರಾಂಶವೇನೆಂದರೆ  ದಿನಾಂಕ;-  24-05-2013  ರಂದು ಬೆಳಗ್ಗೆ 6-45 ಗಂಟೆ ಸಮಯಕ್ಕೆ  ಹೆಚ್‌ ಎಂ ದೇವರಾಜು ಬಿನ್‌  ಮುದ್ದಪ್ಪ  ಹಳೇಪೇಟೆ ಹುಲಿಯೂರುದುರ್ಗ ಟೌನ್‌ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಆಂಶವೇನೆಂದರೆ ದಿನಾಂಕ;- 23-05-2013 ರಾತ್ರಿ 9-00 ಗಂಟೆ ಸಮಯದಲ್ಲಿ ಪಿರ್ಯದಿಯ  ಅಣ್ಣನಾದ  ಪ್ರಕಾಶ ಬಿನ್‌ ಮುದ್ದಪ್ಪ ಮತ್ತು ಅವರ ಹೆಂಡತಿ ಸುನಂದಮ್ಮ ಇಬ್ಬರು ಮನೆಯ ಹತ್ತಿರ ಇರಬೇಕಾದರೆ ಇದೇ  ಗ್ರಾಮದ ಶಿವಲಿಂಗಯ್ಯ  ಆತನ ಮಗ ಗಿರೀಶ, ಶಿವಲಿಂಗಯ್ಯನ ಹೆಂಡತಿ ರತ್ನಮ್ಮ , ಅವರ ಅಣ್ಣನ ಮಗ  ಉಮೇಶ ಇವರುಗಳು ಗುಂಪು ಕಟ್ಟಿಕೊಂಡು ಮಚ್ಚು ಮತ್ತು ದೊಣ್ಣೆ ಹಾಗೂ ರಾಡನ್ನು  ಹಿಡಿದುಕೊಂಡು ಮನೆಯ ಹತ್ತಿರ ಬಂದು ಮನೆ ಕಟ್ಟುವ ವಿಚಾರದಲ್ಲಿ  ಬಾಯಿಗೆ ಬಂದಂತೆ ಬೈದು ಶಿವಲಿಂಗಯ್ಯನ್ನು ಮಚ್ಚಿನಿಂದ ಪ್ರಕಾಶನ ತಲೆಗೆ ಹೊಡೆದು  ರಕ್ತಗಾಯ ಮಾಡಿದ್ದು ನಂತರ ಗಿರೀಶನು ರಾಡಿನಿಂದ ಪ್ರಕಾಶನಿಗೆ ತಲೆಗೆ ಹೊಡೆದು ರಕ್ತಗಾಯ ಪಡಿಸಿದ್ದು ಬಿಡಿಸಿಕೊಳ್ಳಲು ಬಂದ ಸುನಂದಮ್ಮನಿಗೆ ಉಮೇಶ ದೊಣ್ಣೆಯಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿದನು  ನಂತರ ರತ್ನಮ್ಮನು ಸುನಂದಮ್ಮನ ಜುಟ್ಟು   ಹಿಡಿದು ಎಳೆದಾಡಿ ಕೆಳಕ್ಕೆ ಕೆಡವಿ ಕಾಲಿನಿಂದ ತುಳಿದು ಮೈಕೈ ನೋವುಂಟು ಮಾಡಿದ್ದು ನಂತರ ಶಿವಲಿಂಗಯ್ಯನು ನೀನೇನಾದರು ನಮ್ಮ ಮನೆಯ ಪಕ್ಕದಲ್ಲಿ  ಮನೆ ಕಟ್ಟಿದ್ದೆ ಆದರೆ ನಿಮ್ಮಗಳನ್ನು ಮುಗಿಸುತ್ತೇನೆ. ಮತ್ತು ಹೇಳುವುದಕ್ಕೆ ಹೆಸರಿಲ್ಲದಂತೆ ಮಾಡುತ್ತೇನೆಂದು  ಬೆದರಿಕೆ ಹಾಕಿದ್ದು  ಅ ಸಂದರ್ಭದಲ್ಲಿ   ಇದೇ ಗ್ರಾಮದ ರಾಜೇಶ್‌ ಬಿನ್‌ ರಮೇಶ ಶ್ರೀಧರ ಬಿನ್‌ ಗಂಗರಾಮಯ್ಯ ಮತ್ತು ಕೃಷ್ಣ ಬಿನ್‌ ನರಸಪ್ಪ ಇವರುಗಳು ಬಂದು ಜಗಳ ಬಿಡಿಸಿ ಸಮಧಾನ ಪಡಿಸಿದರು ನಂತರ  ಪಿರ್ಯಾದಿಯ ಅಣ್ಣ ಪ್ರಕಾಶನಿಗೆ  ಹಾಗೂ ಅವನ ಹೆಂಡತಿ ಸುನಂದಮ್ಮನಿಗೆ ಏಟು ಜಾಸ್ತಿಯಾಗಿದ್ದರಿಂದ ಹುಲಿಯೂರುದುರ್ಗ ಸರ್ಕಾರಿ ಆಸ್ಪತ್ರಗೆ ಹೋಗಿ ಪ್ರಥಮ ಚಿಕಿತ್ಸೆಗೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಕುಣಿಗಲ್‌ ಸಪ್ತಗಿರಿ  ನರ್ಸಿಂಗ್‌ ಹೋಂ  ಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ  ಈ ದಿನ ತಡವಾಗಿ ಬಂದು ದೂರು ನೀಡಿದ್ದು ಸದರಿ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಕೈಗೊಂಡು ನಮಗೆ ರಕ್ಷಣೆ ನೀಡಬೇಕೆಂದು ಕೊಟ್ಟ ದೂರಿನ ಆಂಶವಾಗಿರುತ್ತೆ.   
ಕೋರಾ ಪೊಲೀಸ್ ಠಾಣಾ ಮೊ.ನಂ-73/2013 ಕಲಂ-279.337  ಐ.ಪಿ.ಸಿ ರೆ/ವಿ 134 (A) &(B) 187 IMV  ACT
ದಿನಾಂಕ- 24-05-2013  ರಂದು ರಾತ್ರಿ  12-30  ಗಂಟೆಯಲ್ಲಿ  ಪಿರ್ಯಾದಿ ಚಂದ್ರಯ್ಯ ಬಿನ್ ಸುಬ್ಬಣ್ಣ ನೆಲಹಾಲ್ ತುಮಕೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ರವರು ನೀಡಿದ  ಲಿಖಿತ ದೂರಿನ  ಅಂಶವೇನೆಂದರೆ   ದಿನಾಂಕ-23-05-2013 ರಂದು ರಾತ್ರಿ ಸುಮಾರು 9-15 ಗಂಟೆಯ ಸಮಯದಲ್ಲಿ ನಮ್ಮ ಚಿಕ್ಕಪ್ಪ ಕೃಷ್ಣಪ್ಪರವರು ರಂಗನಾಥಪ್ಪ ರವರ  ಅಂಗಡಿ ಕಡೆಗೆ ಹೋಗಲು ಶಿರಾ ಕಡೆಯಿಂದ ತುಮಕೂರು ಕಡೆಗೆ ಹೋಗುವ ರಸ್ತೆಯನ್ನು ದಾಟುತ್ತಿದ್ದಾಗ ಅದೇ ವೇಳೆಗೆ ಶಿರಾ ಕಡೆಯಿಂದ ತುಮಕೂರು ಕಡೆಗೆ ಒಂದು ಕಾರನ್ನು ಅದರ  ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದವನೇ ರಸ್ತೆ ದಾಟುತ್ತಿದ್ದ ನಮ್ಮ ಚಿಕ್ಕಪ್ಪ ಕೃಷ್ಣಪ್ಪ ರವರಿಗೆ ಡಿಕ್ಕಿ ಹೊಡೆಸಿದ್ದರಿಂದ ಡಬ್ ಎಂಬ ಶಬ್ದವಾಯಿತು ಕೂಡಲೇ ನಾನು ಮತ್ತು  ಅಲ್ಲೇ ನಿಂತಿದ್ದ ಅನಂತ ಬಿನ್ ಲೇಟ್ ಗೋಪಾಲಪ್ಪ ರೊಂದಿಗೆ ಹೊಗಿ ನೋಡಲಾಗಿ ನಮ್ಮ ಚಿಕ್ಕಪ್ಪ ನವರಿಗೆ  ಬಲಭಾಗದ ಕಣ್ಣಿಗೆ, ಹಣೆಗೆ, ಎಡಮೊಣ ಕೈಗೆ , ಮತ್ತು ಬಲ ಮೊಣಕಾಲಿಗೆ ಪೆಟ್ಟಾಗಿ ರಕ್ತಗಾಯಗಳಾದವು . ಅಪಘಾತ ಮಾಡಿದ ಕಾರನ್ನು ಅದರ ಚಾಲಕ ನಿಲ್ಲಿಸದೆ ಹೊರಟು ಹೋದನು ರಾತ್ರಿಯಾಗಿದ್ದರಿಂದ ಕಾರು ನಂಬರ್ ಕಾಣಲಿಲ್ಲ . ಗಾಯಾಳು ಕೃಷ್ಣ್ಪಪ್ಪ ರವರನ್ನು 108 ಅಂಬುಲೇನ್ಸ್ ನಲ್ಲಿ  ತುಮಕೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟು  ನಂತರ ಠಾಣೆಗೆ  ಬಂದು ಅಪಘಾತ ಮಾಡಿ ನಿಲ್ಲಿಸದೇ ಹೋರಟು ಹೋದ ಕಾರನ್ನು ಪತ್ತೆ ಹಚ್ಚಿ  ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ದೂರು.
ತಿರುಮಣಿ ಪೊಲೀಸ್‌ ಠಾಣೆ ಮೊ.ಸಂ-20/2013 ಕಲಂ 457. 380
ದಿನಾಂಕ: 23/05/2013 ರಂದು  ಯಾರೋ ಕಳ್ಳರು ಫಿರ್ಯಾದಿ ಕೊಲ್ಲಪ್ಪ ಬಿನ್ ಚನ್ನರಾಯಪ್ಪ, 38 ವರ್ಷ, ಉಪ್ಪಾರರು, ಬುಗುಡೂರು ಗ್ರಾಮ, ಪಾವಗಡ ತಾ gÀªÀgÀ  ಮನೆಯ ಬೀಗವನ್ನು ಯಾವುದೋ ಆಯುಧದಿಂಧ ಮೀಟಿ ಮುರಿದು, ಮನೆಯ ಪಕ್ಕ ಬಿಸಾಡಿ ಮನೆಯ ಒಳಗೆ ಪ್ರವೇಶ ಮಾಡಿ ಬೀರುವಿನಲ್ಲಿ ಇಟ್ಟಿದ್ದ ಒಂದು ಜೊತೆ ಸಾದಾ ಬಂಗಾರದ ಓಲೆ & ಹ್ಯಾಂಗಿಗ್ಸ್ ಒಟ್ಟು 6 ಗ್ರಾಂ ಸುಮಾರು 12000=00ರೂಗಳಾಗಿದ್ದು, & ನಗದು ಹಣ 33000=00 ನಗದು ಹಣವನ್ನು ಒಟ್ಟು 45000=00 ರೂಗಳನ್ನು  ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಎಂದು ನೀಡಿದ ಫಿರ್ಯಾದು
ಕೋರಾ ಪೊಲೀಸ್ ಠಾಣಾ ಮೊ.ನಂ-72/2013 ಕಲಂ-279.337  ಐ.ಪಿ.ಸಿ ರೆ/ವಿ 134 (A) &(B) 187 IMV  ACT
ದಿನಾಂಕ- 24-05-2013  ರಂದು ರಾತ್ರಿ  12-30  ಗಂಟೆಯಲ್ಲಿ  ಪಿರ್ಯಾದಿ ಚಂದ್ರಯ್ಯ ಬಿನ್ ಸುಬ್ಬಣ್ಣ ನೆಲಹಾಲ್ ತುಮಕೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ರವರು ನೀಡಿದ  ಲಿಖಿತ ದೂರಿನ  ಅಂಶವೇನೆಂದರೆ   ದಿನಾಂಕ-23-05-2013 ರಂದು ರಾತ್ರಿ ಸುಮಾರು 9-15 ಗಂಟೆಯ ಸಮಯದಲ್ಲಿ ನಮ್ಮ ಚಿಕ್ಕಪ್ಪ ಕೃಷ್ಣಪ್ಪರವರು ರಂಗನಾಥಪ್ಪ ರವರ  ಅಂಗಡಿ ಕಡೆಗೆ ಹೋಗಲು ಶಿರಾ ಕಡೆಯಿಂದ ತುಮಕೂರು ಕಡೆಗೆ ಹೋಗುವ ರಸ್ತೆಯನ್ನು ದಾಟುತ್ತಿದ್ದಾಗ ಅದೇ ವೇಳೆಗೆ ಶಿರಾ ಕಡೆಯಿಂದ ತುಮಕೂರು ಕಡೆಗೆ ಒಂದು ಕಾರನ್ನು ಅದರ  ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದವನೇ ರಸ್ತೆ ದಾಟುತ್ತಿದ್ದ ನಮ್ಮ ಚಿಕ್ಕಪ್ಪ ಕೃಷ್ಣಪ್ಪ ರವರಿಗೆ ಡಿಕ್ಕಿ ಹೊಡೆಸಿದ್ದರಿಂದ ಡಬ್ ಎಂಬ ಶಬ್ದವಾಯಿತು ಕೂಡಲೇ ನಾನು ಮತ್ತು  ಅಲ್ಲೇ ನಿಂತಿದ್ದ ಅನಂತ ಬಿನ್ ಲೇಟ್ ಗೋಪಾಲಪ್ಪ ರೊಂದಿಗೆ ಹೊಗಿ ನೋಡಲಾಗಿ ನಮ್ಮ ಚಿಕ್ಕಪ್ಪ ನವರಿಗೆ  ಬಲಭಾಗದ ಕಣ್ಣಿಗೆ, ಹಣೆಗೆ, ಎಡಮೊಣ ಕೈಗೆ , ಮತ್ತು ಬಲ ಮೊಣಕಾಲಿಗೆ ಪೆಟ್ಟಾಗಿ ರಕ್ತಗಾಯಗಳಾದವು . ಅಪಘಾತ ಮಾಡಿದ ಕಾರನ್ನು ಅದರ ಚಾಲಕ ನಿಲ್ಲಿಸದೆ ಹೊರಟು ಹೋದನು ರಾತ್ರಿಯಾಗಿದ್ದರಿಂದ ಕಾರು ನಂಬರ್ ಕಾಣಲಿಲ್ಲ . ಗಾಯಾಳು ಕೃಷ್ಣ್ಪಪ್ಪ ರವರನ್ನು 108 ಅಂಬುಲೇನ್ಸ್ ನಲ್ಲಿ  ತುಮಕೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟು  ನಂತರ ಠಾಣೆಗೆ  ಬಂದು ಅಪಘಾತ ಮಾಡಿ ನಿಲ್ಲಿಸದೇ ಹೋರಟು ಹೋದ ಕಾರನ್ನು ಪತ್ತೆ ಹಚ್ಚಿ  ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ದೂರು.
ಕೊರಟಗೆರೆ  ಪೊಲೀಸ್ ಠಾಣೆ.   ಮೊ.ಸಂ . 142/2013 U/S 504,323,354,506 R/W 34 IPC
   ದಿನಾಂಕ:23.05.2013 ರಂದು ರಾತ್ರಿ 09:15 ಗಂಟೆಗೆ ಪಿರ್ಯಾದಿ ಶ್ರೀಮತಿ.ಸತ್ಯವತಿ ಕೋಂ ಬಿ.ಕೆ.ರಂಗಸ್ವಾಮಯ್ಯ, 45 ವರ್ಷ, ವಕ್ಕಲಿಗರು, ಗೃಹಿಣಿ, ಎಂ.ಹೊಸಹಳ್ಳಿ, ಕೊರಟಗೆರೆ ತಾಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ನಮ್ಮ ಫಾರಂನಲ್ಲಿ ಕೆಲಸ ಮಾಡುವ ವಿನಯ್ ಹಾಗೂ ನಾನು ಸಾಕಿಕೊಂಡಿರುವ ಆನಂದ ಮತ್ತು ಬೀರೇಶ್ ರವರೊಂದಿಗೆ ದಿ:23.05.2013 ರಂದು ಸಂಜೆ 06:30 ಗಂಟೆಯ ಸಮಯದಲ್ಲಿ ನಮ್ಮ ಗ್ರಾಮಕ್ಕೆ ಸೇರಿರುವ ಅರಸಮ್ಮ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಲು ದೇವಸ್ಥಾನದ ಹತ್ತಿರ ಹೋಗಿದ್ದಾಗ ಹಳೆ ದ್ವೇಶದಿಂದ ಗಂಗಣ್ಣ ಮತ್ತು ವೆಂಕಟೇಶ್ ರವರು ದೇವಸ್ಥಾನದ ಹತ್ತಿರ ಬಂದು ಮಕ್ಕಳನ್ನು ಎಷ್ಟು ದಿನ ಇಟ್ಟುಕೊಳ್ಳುತ್ತಿರಾ ನೋಡೋಣವೆಂತ ನಮ್ಮ ಜೊತೆ ಜಗಳ ತೆಗೆದು ಬೋಳಿಮಕ್ಳಾ, ಸೂಳೆಮುಂಡೆ ಎಂತ ಅವಾಚ್ಯ ಶಬ್ದಗಳಿಂದ ಬೈದು ನನಗೆ ಹಾಗೂ ವಿನಯ್ ರವರಿಗೆ ಗಂಗಣ್ಣ ಮತ್ತು ವೆಂಕಟೇಶ್ ರವರುಗಳು ಕೈಗಳಿಂದ ನಮ್ಮ ಮೈಕೈಗೆ ಹೊಡೆದು ನೋವುಂಟು ಮಾಡಿದರು ಗಂಗಣ್ಣ ನನ್ನ ಎದೆಯ ಭಾಗದಲ್ಲಿ ತನ್ನ ಉಗುರುಗಳಿಂದ ಪರಚಿ ನಾನು ತೊಟ್ಟಿದ್ದ ರವಿಕೆಯನ್ನು ಹರಿದು ಹಾಕಿ ಮಾನಭಂಗಕ್ಕೆ ಪ್ರಯತ್ನಪಟ್ಟನು. ವೆಂಕಟೇಶನು ವಿನಯ್ ರವರು ತೊಟ್ಟಿದ್ದ ಷರ್ಟನ್ನು ಹರಿದು ಹಾಕಿದನು. ಇಷ್ಟಕ್ಕೆ ಸುಮ್ಮನಾಗದ ಗಂಗಣ್ಣ ಮತ್ತು ವೆಂಕಟೇಶ್ ರವರು  ಮಕ್ಕಳನ್ನು ಎಷ್ಟು ದಿನ ನಿಮ್ಮ ಬಳಿ ಇಟ್ಟುಕೊಳ್ಳುತ್ತೀರೋ ನೋಡಿಕೊಳ್ಳುತ್ತೆವೆ, ನಿಮ್ಮ ಎಲ್ಲರ ಪ್ರಾಣವನ್ನು ತೆಗೆಯುತ್ತೇವೆ ಎಂತ ಪ್ರಾಣ ಬೆದರಿಕೆ ಹಾಕಿದರು. ಅಷ್ಟರಲ್ಲಿ ಅಲ್ಲಿಯೇ ಇದ್ದ ನವೀನ ಬಿನ್ ಜಗನ್ನಾಥ್ ಮತ್ತು ಕುಮಾರ ಬಿನ್ ಕಾಮಣ್ಣ ರವರು ಬಂದು ಜಗಳ ಬಿಡಿಸಿ ಸಮಾಧಾನಪಡಿಸಿದರು. ನಂತರ ನಾನು ಮತ್ತು ವಿನಯ್ ಕೊರಟಗೆರೆ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿರುತ್ತೇವೆ. ಆದ್ದರಿಂದ ಗಂಗಣ್ಣ ಮತ್ತು ವೆಂಕಟೇಶ್ ರವರ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಇತ್ಯಾದಿಯಾಗಿ ನೀಡಿದ ಪಿರ್ಯಾದುವನ್ನು ಪಡೆದುಕೊಂಡು ಠಾಣಾ ಹೆಚ್‌‌ಸಿ-18-ಟಿ.ತಿಮ್ಮಯ್ಯ ರವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಕೊರಟಗೆರೆ  ಪೊಲೀಸ್ ಠಾಣೆ.   ಮೊ.ಸಂ. 143/2013 U/S 353.354.504 IPC
         ದಿನಾಂಕ:23.05.2013 ರಂದು ರಾತ್ರಿ 09:45 ಗಂಟೆಗೆ ಪಿರ್ಯಾದಿ ಡಾ||ಸಜಾತನಾಗ್, ವೈದ್ಯಾಧಿಕಾರಿಗಳು, ಸಾರ್ವಜನಿಕ ಆಸ್ಪತ್ರೆ, ಕೊರಟಗೆರೆ ರವರು ಠಾಣೆಗೆ ಹಾಜರಾಗಿ ದಿ:23.05.2013 ರಂದು ಸಂಜೆ ಸುಮಾರು 07:30 ಗಂಟೆಯ ಸಮಯದಲ್ಲಿ ನಾನು ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವಾಗ ಕೊರಟಗೆರೆ ವಾಸಿ ಗಣೇಶ್ ರವರು ಕರೆದುಕೊಂಡು ಬಂದ ಆನಂದ್ ರವರಿಗೆ ಚಿಕಿತ್ಸೆ ನೀಡುತ್ತಿರುವಾಗ ನಾನು ಆಸ್ಪತ್ರೆಯಲ್ಲಿ ಒಬ್ಬಳೆ ಡಾಕ್ಟರ್ ಆಗಿದ್ದರಿಂದ ಸಮಯದಲ್ಲಿ ಪವಿತ್ರ ಎಂಬ ಸ್ಟಾಫ್ ನರ್ಸ್ಬಂದು ನಮ್ಮ ಆಸ್ಪತ್ರೆಯಲ್ಲಿ ಸುಮಾ ಕೋಂ ರಾಮಯ್ಯ ರವರಿಗೆ ಹೆರಿಗೆಯಾಗುತ್ತಿದೆ ಎಂತ ವಿಚಾರ ತಿಳಿಸಿದ್ದರಿಂದ ಆಗ ನಾನು ಸ್ಟಾಫ್ ನರ್ಸ್  ಮಂಜುಳಾ ರವರಿಗೆ ನಮ್ಮಲ್ಲಿರುವ ಔಷಧಿ, ಚುಚ್ಚುಮದ್ದು ಹಾಗೂ ಡಿಎನ್ಎಸ್-ಐವಿ ಯನ್ನು ಆನಂದ್ ರವರಿಗೆ ಕೊಡಲು ತಿಳಿಸಿ ಹೆರಿಗೆ ವಿಭಾಗಕ್ಕೆ ಹೊರಟಾಗ ಗಣೇಶ್ ನನ್ನ ಕೈಯನ್ನು ಹಿಡಿದು ಎಳೆದಾಡಿ ಸುಮಾ ರವರ ಹೆರಿಗೆ ಮಾಡಿಸಲು ಹೊರಟ ನನ್ನನ್ನು ಅಡ್ಡಿಪಡಿಸಿ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದು ಗಲಾಟೆ ಮಾಡಿದಾಗ ಆಗ ತಾನೆ ಚಿಕಿತ್ಸೆ ಪಡೆಯು ಆಸ್ಪತ್ರೆಗೆ ಬಂದಿದ್ದ ಕೊರಟಗೆರೆ ತಾಲೋಕ್ ಎಂ.ಹೊಸಹಳ್ಳಿ ಗ್ರಾಮದ ವಾಸಿ ಬಿ.ವಿ.ಸತ್ಯವತಿ ಕೋಂ ಬಿ.ಕೆ.ರಂಗಸ್ವಾಮಯ್ಯ, ವಿನಯ್ ಬಿನ್ ಬಿ.ಕೆ.ಜಗನ್ನಾಥ್ ಹಾಗೂ ನಮ್ಮ ಆಸ್ಪತ್ರೆಯ ಸಿಬ್ಬಂದಿ ಸ್ಟಾಫ್ ನರ್ಸ್  ಮಂಜು.ಹೆಚ್ ಮೂರು ಜನರು ಸೇರಿ ಬಿಡಿಸಿದರು ನಾನು ಸರ್ಕಾರಿ ಕರ್ತವ್ಯ ನಿರ್ವಹಿಸುತ್ತಿರುವಾಗ ಗಣೇಶ್ ರವರು ನನ್ನ ಕೈಯನ್ನು ಹಿಡಿದು ಎಳೆದಾಡಿ ಅವಾಚ್ಯ ಶಬ್ದಗಳಿಂದ ಬೈದು ಸರ್ಕಾರಿ ಕರ್ತವ್ಯ ನಿರ್ವಹಿಸಲು ಅಡಚಣೆ ಉಂಟುಮಾಡಿದ ಗಣೇಶ್ ರವರ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ನೀಡಿದ ಪಿರ್ಯಾದುವನ್ನು ಪಡೆದುಕೊಂಡು ಠಾಣಾ ಹೆಚ್‌‌ಸಿ-18-ಟಿ.ತಿಮ್ಮಯ್ಯ ರವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ- 108/2013. U/S 341, 324, 506 R/W 34 IPC. & 3cl(X) SC.ST PA. Act. 
ದಿನಾಂಕ 23/05/2013 ರಂದು ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳು ದೀಲಿಪ್ ಎಸ್.ಆರ್ ರವರ ಹೇಳಿಕೆಯನ್ನು ಮಧ್ಯಾಹ್ನ 12-30 ಗಂಟೆಯಿಂದ 01-30 ಗಂಟೆಯವರೆಗೆ ವೈದ್ಯರ ಮುಂದೆ ಪಡೆದ ಹೇಳಿಕೆಯ ಅಂಶವೇನೆಂದರೆ, ದಿನಾಂಕ 22/05/2013 ರಂದು ಸಾಯಂಕಾಲ ತಿಪಟೂರು ಕಲಾ ಭವನದಲ್ಲಿದ್ದ ತನ್ನ ಸ್ನೇಹಿತ ಸತೀಶ್ ಎಂಬುವರ ಎಂಬುವರ ಮದುವೆ ಮುಗಿಕೊಂಡು ವಾಪಸ್ ತನ್ನ ಊರಾದ ಸೂಗೂರಿಗೆ ಹೋಗಲು ಹೊರಟು ರಾತ್ರಿ ಸುಮಾರು 10-45 ಗಂಟೆ ಸಮಯಲ್ಲಿ ತ್ರಿಮೂರ್ತಿ ಟಾಕೀಸ್ ಮುಂಭಾಗದ ಕರ್ನಾಟಕ ಬ್ಯಾಂಕ್ ಎದುರು ಹೋಗುತ್ತಿರುವಾಗ ಸೂಗೂರು  ಗ್ರಾಮದ ವಾಸಿಗಳಾದ  ಜೇನೇಶ, ಗಿರೀಶ, ಮತ್ತು ಕಾಂತರಾಜು ಇವರುಗಳು ನನ್ನನ್ನು ಏಕಾಏಕಿ ಅಡ್ಡಗಟ್ಟಿ ಅವ್ಯಾಚ್ಯ ಶಬ್ದಗಳಿಂದ ಬೈಯುತ್ತಾ ಏನೋ ನಾಯಕ ನನ್ನ  ಮಗನೇ, ಹೀನ ಜಾತಿಯವನೇ ಎಂದು ಜಾತಿಹಿಡಿದು ಬೈಯ್ದು ನೀನು ನಿನ್ನ ಜಾತಿಗೆ ತಕ್ಕಂತೆ ಎಲ್ಲಿಯಾದರೂ ಹೋಗಿ ಕೂಲಿ ಮಾಡುವುನ್ನು ಬಿಟ್ಟು ಬಟ್ಟೆ ವ್ಯಾಪಾರ ಮಾಡುತ್ತೀಯಾ ಎಂದು ಗಲಾಟೆ ಮಾಡಿ ಕಾಂತರಾಜನು ತಾನು ತಂದಿದ್ದ ಕಬ್ಬಿಣದ ರಾಡಿನಿಂದ ನನ್ನ ತಲೆಗೆ ಹಿಂಭಾಗಕ್ಕೆ ಹೊಡೆದು ರಕ್ತ ಗಾಯಪಡಿಸಿದ ಜೇನೇಶನು ಕಲ್ಲಿನಿಂದ ಬಲಭಾಗದ ಎದೆಗೆ ಹೊಡೆದ ಗಿರೀಶನು ಚಾಕು ತೋಸಿ ಚುಚ್ಚಲು ಬಂದ ನಾನು ಕೂಗಿಕೊಂಡಾಗ ಕೆ.ಆರ್ ಬಡಾವಣೆಯ ವಾಸಿ ಶಾಮು ಕಂಚಾಘಟ್ಟದ ವಾಸಿ ರಘು ಬಂದು ಗಲಾಟೆ ಬಿಡಿಸಿದರು. ಅಷ್ಟಕ್ಕೂ ಬಿಡದೇ ಮೇಲ್ಕಂಡ ಮೂವರು ಪ್ರಾಣ ಬೆದರಿಕೆ ಹಾಕಿ ಹೋದರು. ನನಗೆ ಹೊಡೆದು ರಕ್ತಗಾಯಪಡಿಸಿ, ಜಾತಿ ನಿಂದನೆ ಮಾಡಿ, ಪ್ರಾಣ ಬೆದರಿಕೆ ಹಾಕಿದ ಮೇಲ್ಕಂಡ ಮೂರು ಜನರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ಹೇಳಿಕೆಯ ಅಂಶ. 
ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಯು.ಡಿ.ಆರ್ ನಂ. 13/2013 ಕಲಂ 174 ಸಿ.ಆರ್.ಪಿಸಿ         
ದಿನಾಂಕ;23/05/2013 ರಂದು ಮದ್ಯಾಹ್ನ 12-10 ಗಂಟೆಗೆ ಸಿರಾ ತಾಲ್ಲೂಕು ಕುರಬರಾಮನಹಳ್ಳಿ ಗ್ರಾಮದ ವಾಸಿ ಪಿರ್ಯಾದಿ ರುದ್ರಪ್ಪ ಬಿನ್ ಚಿಕ್ಕರಂಗಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಪಿರ್ಯಾದಿನ ಸಾರಾಂಶವೇನೆಂದರೆ ಪಿರ್ಯಾದಿಯ ಮಗ ಚಂದ್ರಶೇಖರ್  ಮದ್ಯವ್ಯಸನಿಯಾಗಿದ್ದು ಮನೆಯಲ್ಲಿರುವವರು ಎಷ್ಟೇ ಬುದ್ದಿವಾದ ಹೇಳಿದರೂ ಮದ್ಯಪಾನ ಬಿಟ್ಟಿರಲಿಲ್ಲ ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡ ಚಂದ್ರಶೇಖರ್ ಮದ್ಯಪಾನ ಬಿಡಲಿಲ್ಲ ಎಂದು  ದಿನಾಂಕ;23/05/2013 ರಂದು ಬೆಳಗ್ಗೆ 10-30 ಗಂಟೆಗೆ ಯಾವುದೋ ವಿಷ ಸೇವಿಸಿ ಮೃತ ಪಟ್ಟಿರುತ್ತಾನೆ ಇತ್ಯಾದಿ ಮೇರೆಗೆ ಈ ಪ್ರಕರಣ
ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ ನಂ  182/2013  ಕಲಂ 279, 304 (ಎ) ಐ.ಪಿ.ಸಿ
 ದಿನಾಂಕ:23-05-2013 ರಂದು ಮದ್ಯಾಹ್ನ 3-45 ಗಂಟೆ ಸಮಯದಲ್ಲಿ ಪಿರ್ಯಾದಿ ನರಸಿಂಹಮೂರ್ತಿ ರವರು ಹಾಜರಾಗಿ ನೀಡಿದ ದೂರಿನ ಅಂಶವೆನೆಂದರೆ ಅಗಳಕೋಟೆ ಮತ್ತು ಹೆಗ್ಗೆರೆ ಗ್ರಾಮದಲ್ಲಿ  ಜಾತ್ರೆ ಇದ್ದುದ್ದರಿಂದ ನಾನು ನಮ್ಮ ನೆಂಟರ ಮನೆಗೆ ಬಂದಿದ್ದೆ. ಈ ದಿನ ದಿನಾಂಕ: 23-05-2013 ರಂದು  ಮದ್ಯಾಹ್ನ 2-30 ಗಂಟೆಗೆ ಸಮಯದಲ್ಲಿ ಅಗಳಕೋಟೆ ಕಡೆಯಿಂದ ಹೆಗ್ಗೆರೆಗೆ ಹೋಗಲು ಸಿದ್ದಾರ್ಥ ಮೆಡಿಕಲ್  ಕಾಲೇಜಿನಲ್ಲಿ ಆಯಾ ಕೆಲಸ ಮಾಡುವ ನಮ್ಮ ಸಂಬಂಧಿ ಲಕ್ಷ್ಮಮ್ಮ ಮತ್ತು ನರಸಮ್ಮ ಕೋಂ ಅಂಜಿನಪ್ಪ ಮೂವರು ಹೆಗ್ಗೆರೆ ಬಸ್ ನಿಲ್ದಾಣದ ಕಡೆಗೆ ಎನ್ ಹೆಚ್ 206 ರಸ್ತೆ ಕಡೆ ನಡೆದುಕೊಂಡು ಹೋಗುತ್ತಿದ್ದೆವು. ಮದ್ಯಾಹ್ನ ಸುಮಾರು 3-00 ಗಂಟೆಗೆ ಹೆಗ್ಗೆರೆ ಆರ್ ಆರ್ ರೆಸಿಡೆನ್ಸಿ ಕಡೆಗೆ ಹೋಗಲು ನ್ಯಾಷನಲ್ ಹೋಟೆಲ್ ಕಡೆಯಿಂದ ರಸ್ತೆ ದಾಟುತ್ತಿರುವಾಗ್ಗೆ, ತುಮಕೂರು ಕಡೆಯಿಂದ ಗುಬ್ಬಿ ಕಡೆಗೆ ಹೋಗುತ್ತಿದ್ದ ಕೆಎ-06-ಎಂ-2246 ನೇ ಟಾಟಾ ಸುಮೊ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನರಸಮ್ಮನಿಗೆ ಡಿಕ್ಕಿ ಹೊಡೆಸಿದ ಪರಿಣಾಮ ನರಸಮ್ಮನಿಗೆ ತಲೆಗೆ, ಮೈಗೆ,  ಕೈ, ಕಾಲುಗಳಿಗೆ ತೀವ್ರತರದ ಪೆಟ್ಟುಬಿದ್ದು, ರಕ್ತಗಾಯವಾಗಿ ಸ್ಥಳದಲ್ಲೆ ಮೃತಪಟ್ಟಳು. ಈ ಅಪಘಾತ ಉಂಟು ಮಾಡಿದ ಚಾಲಕ ತನ್ನ ವಾಹನವನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ ವಾಹನ ಬಿಟ್ಟು ಹೊರಟು ಹೋದ ಆತನ ಹೆಸರು ತಿಳಿಯಲಿಲ್ಲ. ಅಪಘಾತ ಉಂಟು ಮಾಡಿದ ವಾಹನದ ಸಂಖ್ಯೆ ನೋಡಲಾಗಿ ಕೆಎ-06-ಎಂ-2246 ಆಗಿರುತ್ತೆ, ಆದ್ದರಿಂದ ಈ ಅಪಘಾತ ಉಂಟು ಮಾಡಿದ ಮೇಲ್ಕಂಡ ಟಾಟಾ ಸುಮೋ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ದೂರು.
ಕುಣಿಗಲ್ ಪೊಲೀಸ್ ಠಾಣಾ ಮೊ.ನಂ: 177/2013, ಕಲಂ: 304(ಎ) ಐಪಿಸಿ
ಕೇಸಿನ ಸಂಕ್ಷಿಪ್ತ ಸಾರಾಂಶವೇನೆಂದರೆ ದಿನಾಂಕ:23-05-2013 ರಂದು ಮದ್ಯಾಹ್ನ 2-30 ಗಂಟೆಯಲ್ಲಿ ಈ ಕೇಸಿನ ಪಿರ್ಯಾದಿ ಅವಳಯ್ಯ ಬಿನ್ ಬಡಕಯ್ಯ ಕೊಡಿಹಳ್ಳಿ ಕೊತ್ತಗೆರೆ ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ದಿನಾಂಕ:23-05-2013 ರಂದು ಬೆಳಗ್ಗೆ 11-00 ಗಂಟೆ ಸಮಯದಲ್ಲಿ ಪಿರ್ಯಾದಿ, ಪಿರ್ಯಾದಿ ತಂದೆ ಬಡಕಯ್ಯ ಮತ್ತು ಅವರ ಗ್ರಾಮದ ದೊಡ್ಡಯ್ಯ ಬಿನ್ ಲೇಟ್‌ ಕಂಬಯ್ಯ, ಸಿದ್ದಗಂಗಯ್ಯ ಬಿನ್ ಲೇಟ್‌ ಮರಿದೊಡ್ಡಯ್ಯ, ರವರುಗಳು ಮಾತನಾಡುತ್ತಾ ಪಿರ್ಯಾದಿ ಮನೆ ಮುಂದೆ ನಿಂತಿದ್ದಾಗ, ಪಿರ್ಯಾದಿ ತಾಯಿ ಜಯಮ್ಮ ಅವರ ಮನೆ ಮುಂದೆ ನೀರಿನ ಟ್ಯಾಂಕ್‌ ಹತ್ತಿರ ನೀರನ್ನು ತರಲು ಹೋದಾಗ ಟ್ಯಾಂಕ್‌ ಪಕ್ಕದಲ್ಲೇ ಇದ್ದ ಲೈಟ್‌ ಕಂಬದಿಂದ ವಿದ್ಯುತ್ ತಂತಿ ಮರಕ್ಕೆ ತಗಲುತ್ತಿದ್ದು ಈ ಬಗ್ಗೆ ಹಲವಾರು ಬಾರಿ ಕುಣಿಗಲ್‌ನ ಬೆಸ್ಕಾಂ ಅಧಿಕಾರಿಗಳಿಗೆ ದೂರು ನೀಡಿದ್ದು, ಯಾವುದೇ ಪ್ರಯೋಜನವಾಗಿರುವುದಿಲ್ಲ, ಈಗ ಸದರಿ ತಂತಿ ತುಂಡಾಗಿ ಬಿದ್ದಿತ್ತು. ಅದನ್ನು ನೋಡದ ಪಿರ್ಯಾದಿ ತಾಯಿ ತಂತಿಯನ್ನು ತುಳಿದಿದ್ದು ಸದರಿ ತಂತಿಯಲ್ಲಿ ವಿದ್ಯುತ್ ಪಿರ್ಯಾದಿ ತಾಯಿಗೆ ತಗುಲಿ ಕಿರುಚಾಡಿ ಕೂಗಾಡಿಕೊಂಡು ಜ್ಞಾನ ತಪ್ಪಿ ಒದ್ದಾಡುತ್ತಿದ್ದರು. ತಕ್ಷಣ ಪಿರ್ಯಾದಿ ಮತ್ತು ಇತರರು ಹೋಗಿ ನೋಡಿ ಒಂದು ಒಣ ಕಡ್ಡಿಯಿಂದ ಸದರಿ ವಿದ್ಯುತ್ ತಂತಿಯನ್ನು ದೂರ ತಳ್ಳಿ ಜಯಮ್ಮರವರನ್ನು ಉಪಚರಿಸಿ ಅವರದೇ ವಾಹನದಲ್ಲಿ ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸಲು ಬಂದಾಗ ವೈದ್ಯರು ಜಯಮ್ಮನನ್ನು ಪರೀಕ್ಷಿಸಿ ನಿಮ್ಮ ತಾಯಿ ಮೃತಪಟ್ಟಿರುತ್ತಾರೆಂದು ತಿಳಿಸಿದ್ದು, ನನ್ನ ತಾಯಿಯ ಸಾವಿಗೆ ಕುಣಿಗಲ್‌ನ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷತನವೇ ಕಾರಣವಾಗಿರುತ್ತೆ. ಅವರ ಮೇಲೆ ಕಾನೂನು ಕ್ರಮ ಜರುಗಿಸಿ ಎಂತ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ
ಹೊಸಬಡಾವಣೆ ಪೊಲೀಸ್ ಠಾಣಾ  ಮೊ.ಸಂ - 124/2013 u/s 392 IPC
ದಿನಾಂಕ:23-05-2013 ರಂದು 01-30 ಗಂಟೆಗೆ ಪಿರ್ಯಾದಿ ಕಾಂತರಾಜು ಬಿನ್ ಮಹಲಿಂಗಪ್ಪ,32 ವರ್ಷ, ಲಿಂಗಾಯ್ತರು, ಉಜ್ಜೀವನ್ ಮೈಕ್ರೋ ಪೈನಾನ್ಸ್ ನಲ್ಲಿ ಕೆಲಸ,ವಾಸ, ದಾನಾ ಪ್ಯಾಲೇಸ್, 1ನೇ  ಕ್ರಾಸ್, ತುಮಕೂರು  ಸ್ವಂತ ಊರು, ಗುಡಿಗೊಂಡನ ಹಳ್ಳಿ. ತಿಪಟೂರು, ರವರು ಹಾಜರಾಗಿ ನಾನು ತುಮಕೂರು ನಗರದ ಧಾನಾ ಪ್ಯಾಲೇಸ್, 1ನೇ  ಕ್ರಾಸ್‌‌ನಲ್ಲಿ ವಾಸವಾಗಿದ್ದು, ನಾನು ಉಜ್ಜೀವನ್ ಮೈಕ್ರೋ ಪೈನಾನ್ಸ್‌‌‌ನಲ್ಲಿ 4 ವರ್ಷ 10 ತಿಂಗಳಿಂದ  ಕಸ್ಟಮರ್ ರಿಲೇಷನ್ ಸ್ಟಾಪ್(ಸಿ.ಆರ್.ಎಸ್) ಆಗಿ ಕೆಲಸ ಮಾಡಿಕೊಂಡಿರುತ್ತೇನೆ. ತುಮಕೂರು ಬ್ರಾಂಚ್‌‌ನಲ್ಲಿ ಈಗ್ಗೆ 6 ತಿಂಗಳಿಂದ ಕೆಲಸ ಮಾಡುತ್ತಿರುತ್ತೇನೆ. ನಾನು ಪ್ರತಿ ದಿನ ಅರ್ಜಿ ಬರೆಯುವ ಕೆಲಸ, ಗ್ರಾಹಕರಿಂದ ಹಣ ಸಂಗ್ರಹಿಸುವ ಕೆಲಸ ಮಾಡುತ್ತೇನೆ.  ದಿನಾಂಕ 23-05-2013 ರಂದು  ಬೆಳ್ಳಗ್ಗೆ 6-00 ಗಂಟೆಗೆ ಉಜ್ಜೀವನ್ ಮೈಕ್ರೋ ಪೈನಾನ್ಸ್‌‌ನ ಹಣ ಸಂಗ್ರಹಿಸಲು ನನ್ನ ಕೆಎ-44-ಇ-3381 ಡಿಸ್ಕವರ್ ದ್ವಿಚಕ್ರ ವಾಹನದಲ್ಲಿ ದಾನಾಪ್ಯಾಲೇಸ್‌‌ನಿಂದ ಹೊರಟು 6-30 ಗಂಟೆಗೆ ಬಂಡೇಪಾಳ್ಯಕ್ಕೆ ಹೋಗಿ, ಅಲ್ಲಿ ಎರಡೂ ಸಂಘಗಳಿಂದ ಒಟ್ಟು 17,160=00 ರೂಗಳನ್ನು  ಸಂಗ್ರಹಿಸಿ, ನಂತರ ಕುಂದೂರು ರಸ್ತೆಯ ಶಾಂತಮ್ಮ ರವರಿಂದ 23,461=00  ರೂಗಳನ್ನು  ಸಂಗ್ರಹಿಸಿ,  ನಂತರ 8-00  ಗಂಟೆಗೆ ಮರಳೂರಿಗೆ ಹೋಗಿ ಅಲ್ಲಿ ಸುಶೀಲಮ್ಮ ರವರಿಂದ 42,765=00 ರೂಗಳನ್ನು ಸಂಗ್ರಹಿಸಿ,  ನಂತರ 8-30 ಕ್ಕೆ ಬಿಟ್ಟು 9-00 ಗಂಟೆಗೆ ದೇವನೂರಿಗೆ ಬಂದು ಮಾಲತಿ, ಪುಪ್ಷವತಿ, ಜಯಮ್ಮ, ಹಾಗೂ  ಇತರರಿಂದ  ಒಟ್ಟು 44470=00 ರೂಗಳನ್ನು ಸಂಗ್ರಹಿಸಿ, ನಂತರ ಸ್ಟಾಲಿನ್  ರವರ ಮನೆಗೆ ಹೋಗಿ ಜಯಮ್ಮ ರವರ ಬಾಬ್ತು ಒಟ್ಟು  1,146=00 ರೂಗಳನ್ನು ಪಡೆದು, ಒಟ್ಟು 1,27,965 ರೂಗಳನ್ನು ನನ್ನ ಬ್ಯಾಗ್‌ನಲ್ಲಿ ಇಟ್ಟುಕೊಂಡೆನು. ನಂತರ ದೇವನೂರಿನಿಂದ ಎಂ.ಜಿ.ರಸ್ತೆಯ ನಮ್ಮ ಆಪೀಸ್‌‌ಗೆ ಬರಲು ದೇವನೂರು ಮುಖ್ಯ ರಸ್ತೆಯಲ್ಲಿ ಸತ್ಯಕಾಂತಮ್ಮ ಛತ್ರದ ಮುಂಬಾಗದಲ್ಲಿ ಬರುತ್ತಿದ್ದಂತಯೇ ಯಾರೋ ಅಪರಿಚಿತರು ಸತ್ಯಕಾಂತಮ್ಮ ಧತ್ರದ ಎದುರಿನ ಪಕ್ಕದ ರಸ್ತೆಯಿಂದ ಬಂದು 10-45 ಗಂಟೆಗೆ ಒಂದು ಮೋಟಾರೂ ಸೈಕಲ್ ನಲ್ಲಿ ಇದ್ದಕ್ಕಿದ್ದಂತೆ ಬಂದಿದ್ದರಿಂದ ಬ್ರೇಕ್ ಹಾಕಿ  ಗಾಡಿಯನ್ನು ನಿಲ್ಲಿಸಿದೆನು, ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು  ಅಪರಿಚಿತ  ವ್ಯಕ್ತಿಗಳಲ್ಲಿ ಒಬ್ಬನು  ಇಳಿದು  ನನ್ನ  ಹಣವಿದ್ದ ಬ್ಯಾಗನ್ನು ಕಿತ್ತುಕೊಂಡನು. ನಾನು ಆತನ ಕೈ ಹಿಡಿದುಕೊಳ್ಳುವಷ್ಟರಲ್ಲಿ  ಕಾರದ ಪುಡಿ ಎರಚಿದನು. ನನಗೆ ಕಣ್ಣು ಬಿಡಲು ಸಾದ್ಯವಾಗಲಿಲ್ಲ. ಬಂದಿದ್ದ ಅಪರಿಚಿತರಲ್ಲಿ ಇಬ್ಬರೂ ಸಹ 25 ರಿಂದ 30 ವರ್ಷ ದೊಳಗಿನವರಾಗಿದ್ದರು. ಗಾಡಿ ಚಾಲನೆ ಮಾಡುತ್ತಿದ್ದವನು ಹೆಲ್ಮೆಟ್ ದರಿಸಿದ್ದನು, ಇನ್ನೊಬ್ಬನು ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದನು. ತಕ್ಷಣ ನಾನು ಗಾಡಿಯಿಂದ ಕೆಳಗೆ ಬಿದ್ದೆನು. ಅಪರಿಚಿತರು ತಂದಿದ್ದ ವಾಹನದ ನಂಬರ್ ನೋಡಲಾಗಲಿಲ್ಲ. ತಕ್ಷಣ ನಾನು ಸುದಾರಿಸಿಕೊಂಡು ನಮ್ಮ ಮೇನೇಜರ್ ರವರಿಗೆ ಹಣವನ್ನು ಕಿತ್ತುಕೊಂಡು ಹೋದ ಬಗ್ಗೆ ತಿಳಿಸಿದೆನು. ತಕ್ಷಣ ರವಿಕುಮಾರ್, ನಾಯಕ್, ಚಿಕ್ಕವೀರಯ್ಯ ಮತ್ತು ಅವರ ಜೊತೆ ಇಬ್ಬರು ಸ್ನೇಹಿತರ ಬಂದು ನನಗೆ ನೀರು ಹಾಕಿ ನನ್ನನ್ನು  ಸ್ಥಳದಲ್ಲಿಯೇ ವಿಚಾರಿಸಿ ಚಿಕಿತ್ಸೆಗಾಗಿ ವಾಸನ್ ಐ  ಕೇಸ್ ಆಸ್ವತ್ರೆಗೆ ಕರೆದುಕೊಂಡು ಬಂದು  ಚಿಕಿತ್ಸೆಗೆ ದಾಖಲಿಸಿದರು.  ಚಿಕಿತ್ಸೆ ಪಡೆದ ನಂತರ  ಆಸ್ವತ್ರೆಯಿಂದ  ಪೊಲೀಸ್ ಠಾಣೆಗೆ ಬಂದು  ನನ್ನಿಂದ  ಒಟ್ಟು 1,27,965  ರೂಗಳನ್ನು ಮತ್ತು ಬ್ಯಾಗನ್ನು ಕಿತ್ತುಕೊಂಡು ಹೋಗಿರುವ  ಆರೋಪಿಗಳನ್ನು ಪತ್ತೆ  ಮಾಡಿ  ಅವರ ವಿರುದ್ದ ಕಾನೂನು  ಕ್ರಮ ಜರುಗಿಸಬೇಕೆಂದು ಕೋರುತ್ತೇನೆ.
ಹೊಸಬಡಾವಣೆ ಪೊಲೀಸ್ ಠಾಣಾ  ಮೊ.ಸಂ   123/2013 u/s 379 IPC
ದಿನಾಂಕ:22-05-2013 ರಂದು ರಾತ್ರಿ 08-45 ಗಂಟೆಗೆ ಪಿರ್ಯಾದಿ ಕೆ.ಕಾಂತರಾಜು ಬಿನ್ ಕೆ.ಕೆಂಪಣ್ಣ, 49ವರ್ಷ, ನಿರ್ದೇಶಕರು, ಮೆಟಮಾ ಫೋಸಿಸ್‌ ಪರಿಸರ ಮತ್ತು ಕೈಗಾರಿಕಾ ಸಂಶೋಧನಾ ಪ್ರಯೋಗಾಲಯ, ಕೃಷಿಕ್‌ ಸರ್ವೋದಯ ಭವನ, ಕುವೆಂಪು ನಗರ, ತುಮಕೂರು ರವರು ಹಾಜರಾಗಿ, ನಾನು ಸುಮಾರು ಒಂದು ವರ್ಷದಿಂದ ಮೇಲ್ಕಂಡ ಪ್ರಯೋಗಾಲಯವನ್ನು ಸ್ಥಾಪಿಸಿ, ನಡೆಸುತ್ತಿದ್ದು, ಸದರಿ ಸಂಸ್ಥೆಯ ವ್ಯವಹಾರಗಳನ್ನು ನಿರ್ವಹಿಸಲು ನನ್ನ ಬಳಿ Silver Gray Colour Reg.No: KA-51-Z-2366 ನೇ Tata Sumo Grande LX ವಾಹನವು ಇದ್ದು, ದಿನಾಂಕ:04-05-2013 ರಂದು ಶನಿವಾರ ಸಂಜೆ ನಾನು ಎಂದಿನಂತೆ ನನ್ನ ಅಫೀಸ್‌ ಕಾಂಪೌಂಡ್‌‌ ಒಳಗೆ ನನ್ನ ಕಾರನ್ನು ಪಾರ್ಕಿಂಗ್‌ ಮಾಡಿ ಅಲ್ಲಿಂದ ಸುಮಾರು 1km ದೂರದಲ್ಲಿರುವ ನನ್ನ ವಾಸದ ಮನೆ ವಿದ್ಯಾನಗರದ ವಾಟರ್‌ ಟ್ಯಾಂಕ್‌ ಹಿಂಭಾಗದ ಧರೆಮನೆಗೆ ಹೋಗಿರುತ್ತೇನೆ. ದಿನಾಂಕ: 05-05-2013 ರಜಾ ಇದ್ದ ಪ್ರಯುಕ್ತ ತನ್ನ ಗಾಡಿಯನ್ನು ನಮ್ಮ ಅಫೀಸ್‌ನಿಂದ ತೆಗೆದುಕೊಂಡು ಹೋಗಿರಲಿಲ್ಲ. ದಿನಾಂಕ:06-05-2013 ರಂದು ಬೆಳಿಗ್ಗೆ 09-00 ಗಂಟೆ ಸಮಯಕ್ಕೆ ಎಂದಿನಂತೆ ಅಫೀಸ್‌ಗೆ ಬಂದು ಕಾರನ್ನು ನೋಡಲಾಗಿ ಕಾರು ನಿಲ್ಲಿಸಿದ್ದ ಜಾಗದಲ್ಲಿ ಕಾರು ಇರಲಿಲ್ಲ. ಯಾರೋ ಕಳ್ಳರು ನಮ್ಮ ಬಾಬ್ತು Tata Sumo Grande ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಾವು ಎಲ್ಲಾ ಕಡೆ ಹುಡುಕಾಡಿ, ಹಾಗೂ ನನ್ನ ಸಂಸ್ಥೆಯ ಕೇರಳದ ಶಾಖೆಯಲ್ಲಿ ತುರ್ತು ಕೆಲಸವಿದ್ದುದರಿಂದ ಅಲ್ಲಿಗೆ ಹೋಗಿ, ಈ ದಿನ ತಡವಾಗಿ ಬಂದು ದೂರು ನೀಡುತ್ತಿರುತ್ತೇನೆ. ನನ್ನ ಬಾಬ್ತು ಕಾರನ್ನು ಪತ್ತೆ ಮಾಡಿ, ಕಳ್ಳತನ ಮಾಡಿರುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರು. ಇದರೊಂದಿಗೆ ಅಸಲು ಪಿರ್ಯಾದನ್ನು ಲಗತ್ತಿಸಿದೆ.